Sunday, 8th September 2024
 
Advertise With Us | Contact Us

ಬೆಂಗಳೂರಿನಲ್ಲಿ ಸಾಮೂಹಿಕ ಅತ್ಯಾಚಾರ

ಬೆಂಗಳೂರು : ಅತ್ಯಾಚಾರ ಪ್ರಕರಣಗಳು ಕಡಿಮೆಯಾಗಿವೆಯೇನೋ ಎಂದು ಜನರು ನಿಟ್ಟುಸಿರಿಡುವ ಹೊತ್ತಿಗೆ ಮತ್ತೊಮ್ಮೆ ಉದ್ಯಾನನಗರಿಯಲ್ಲಿ ಕಾಮುಕರು ತಮ್ಮ ಅಟ್ಟಹಾಸ ಮೆರೆದಿದ್ದಾರೆ.

34 ವರ್ಷದ ವಿವಾಹಿತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರವಾದ ಪ್ರಕರಣ ಬೆಂಗಳೂರಿನ ಭಾರತೀನಗರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ಅಸ್ವಸ್ಥ ಸಂತ್ರಸ್ಥೆಯನ್ನು ಆಸ್ಪತ್ರೆಗೆ ದಾಖಲಿಸುವಲ್ಲಿ ಮಾತ್ರ ಪೋಲೀಸರು ಯಶಸ್ವಿಯಾಗಿದ್ದಾರೆ.

ಪತಿಯೂ ಸೇರಿದಂತೆ ನಾಲ್ಕುಜನ ಸ್ನೇಹಿತರು ಸಂತ್ರಸ್ಥೆಯ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿದ್ದು ಅರೆಪ್ರಜ್ಞಾವಸ್ಥೆಯಲ್ಲಿದ್ದ ಮಹಿಳೆಯ ಕುರಿತು ಸ್ಥಳೀಯರೇ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಜಂಬೂಬಜಾರ್ ಬಳಿ ವಾಸಿಸುತ್ತಿರುವ ಸಂತ್ರಸ್ಥೆಯ ಮೇಲೆ ಜೂ11 ರಂದು ಅತ್ಯಾಚಾರ ನೆಡೆದಿದ್ದು ಘಟನೆ ನೆಡೆದು ನಾಲ್ಕೈದು ದಿನಗಳ ನಂತರ ವಿಷಯ ಬೆಳಕಿಗೆ ಬಂದಿದೆ.

ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಪತಿ ಇಂತಹ ಹೀನ ಕೃತ್ಯ ನೆಡೆಸಿದ್ದಾನೆ ಎಂದಿರುವ ಸಂತ್ರಸ್ಥೆ ಒಂದು ಬಾರಿ ಜಂಬೂಬಜಾರ್ ನ ಬಳಿ ಅತ್ಯಾಚಾರವಾಗಿದೆ ಎಂದೂ, ಇನ್ನೊಮ್ಮೆ ಕೆ.ಆರ್ ಪುರಂ ಬಳಿ ಅತ್ಯಾಚಾರವಾಗಿದೆ ಎಂದೂ ಹೇಳಿರುವುದು ಅನುಮಾನಾಸ್ಪದವಾಗಿದೆ ಎಂದು ಹೆಚ್ಚುವರಿ ಪೋಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಅವರು ತಿಳಿಸಿದ್ದಾರೆ.

ಆಘಾತಕ್ಕೊಳಗಾಗಿರುವ ಸಂತ್ರಸ್ಥೆ ಸಂಪೂರ್ಣ ಗುಣಮುಖವಾದ ನಂತರ ಹೆಚ್ಚಿನ ತನಿಖೆ ನೆಡೆಸಲಾಗುವುದು ಎಂದು ಪೂರ್ವ ವಿಭಾಗದ ಪೋಲೀಸರು ತಿಳಿಸಿದ್ದಾರೆ.

Leave a Reply

Your email address will not be published.

Dhyeya

Contact Us

Dhyeya Media Pvt. Ltd.
#50, 1st Floor, Acharya Arcade, 4th Cross,
1st Block, 3rd Phase, Banashankari 3rd Stage,
Bengaluru – 560 085