ಲಾಸ್ ಎಂಜಲೀಸ್ : ಬಾಲಿವುಡ್ ಮಾತ್ರವಲ್ಲದೇ ಹಾಲಿವುಡ್ ನಲ್ಲೂ ತಮ್ಮ ಛಾಪು ಮೂಡಿಸಿರುವ ಪ್ರಿಯಾಂಕಾ ಚೋಪ್ರಾ ಇದೀಗ ಮತ್ತೊಂದು ಯಶಸ್ಸಿನ ಗರಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ನಿರ್ಮಾಪಕಿ ಪ್ರಿಯಾಂಕ್ ಚೋಪ್ರಾ ಅವರು ಈಗ ನಟರ ಪಟ್ಟಿಯಲ್ಲಿ ಮೊದಲಸ್ಥಾನ ಪಡೆಯುವ ಮೂಲಕ ತಮ್ಮ ‘ಬೇ ವಾಚ್’ ಸಹನಟರಾದ ಡ್ವೇಯ್ನ್ ಜಾನ್ಸನ್ ಹಾಗೂ ಝಾಕ್ ಎಫ್ರಾನ್ ಅವರನ್ನು ಹಿಂದಿಕ್ಕಿದ್ದಾರೆ.
ಒಂದು ವಾರದ ಹಿಂದಷ್ಟೇ ಹಾಲಿವುಡ್ ರಿಪೋರ್ಟರ್ಸ್ ಇನಾಗರಲ್ ಟಾಪ್ ಆಕ್ಟರ್ಸ್ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದ ಪ್ರಿಯಾಂಕಾ ಚೋಪ್ರಾ ಇದೀಗ ನಂ1 ಸ್ಥಾನದಲ್ಲಿದ್ದ ಜಾನ್ಸನ್ ಅವರನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದ್ದಾರೆ.
ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಇನ್ಸ್ಟಾಗ್ರಾಮ್, ಟ್ವೀಟರ್, ಯೂಟ್ಯೂಬ್ ಹಾಗೂ ಗೂಗಲ್ ಪ್ಲಸ್ ನಲ್ಲಿ ಅತಿ ಹೆಚ್ಚು ಜನಪ್ರಿಯತೆ ಹೊಂದಿರುವ ನಟ ನಟಿಯರನ್ನು ಟಾಪ್ ಆಕ್ಟರ್ಸ್ ಪಟ್ಟಿಗೆ ಆರಿಸಲಾಗಿದೆ.
ಸಾಮಾಜಿಕ ಮಾಧ್ಯಮಗಳ ವಿಶ್ಲೇಷಣಾ ಕಂಪೆನಿ ಎಂ.ವಿ.ಪಿಂಡೇಕ್ಸ್ ನೀಡಿದ ಅಂಕಿ ಅಂಶಗಳ ಆಧಾರದ ಮೇಲೆ ವಾರಕ್ಕೊಮ್ಮೆ ಈ ಟಾಪ್ ಆಕ್ಟರ್ಸ್ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ.
ಪ್ರಿಯಾಂಕಾ ಚೋಪ್ರಾ ಅವರು ತಮ್ಮ ಜನಪ್ರಿಯ ಕ್ವಾಂಟಿಕೋ ಟಿವಿ ಶೋ ಮೂಲಕ ಹಾಲಿವುಡ್ ನಲ್ಲೂ ತಮ್ಮ ಛಾಪು ಮೂಡಿಸಿದ್ದಲ್ಲದೇ ನಂ.1ಸ್ಥಾನಕ್ಕೇರುವುದರ ಮೂಲಕ ಇನ್ನಷ್ಟು ಖ್ಯಾತಿಯನ್ನೂ ಗಳಿಸಿಕೊಂಡಿದ್ದಾರೆ.