Tuesday, 19th March 2024
 
Advertise With Us | Contact Us

ಆರೆಸ್ಸೆಸ್ ಅಖಿಲ ಭಾರತೀಯ ಪ್ರತಿನಿಧಿ ಸಭಾ: ಬೆಂಗಳೂರು 15-17 ಮಾರ್ಚ್ 2020: ಪತ್ರಿಕಾಗೋಷ್ಠಿಗಳ ವಿವರ

ರಾಷ್ಟ್ರೀಯ ಸ್ವಯಂಸೇವಕ ಸಂಘ
ನಂ.74 , ಎಂ. ರಂಗರಾವ್ ರಸ್ತೆ, ಶಂಕರಪುರಂ, ಬೆಂಗಳೂರು
ಅಖಿಲ ಭಾರತೀಯ ಪ್ರತಿನಿಧಿ ಸಭಾ

ಬೆಂಗಳೂರು, 9 ಮಾರ್ಚ್ 2020
ಮಾನ್ಯ ಸಂಪಾದಕರೇ,
ರಾಷ್ಟ್ರೀಯ ಸ್ವಯಂಸೇವಕ ಸಂಘದ ನೀತಿ–ನಿರ್ಧಾರಗಳನ್ನು ನಿರೂಪಿಸುವ ಮಹತ್ವದ ವಾರ್ಷಿಕ ಅಧಿವೇಶನವಾದ ಅಖಿಲ ಭಾರತೀಯ ಪ್ರತಿನಿಧಿ ಸಭಾ (ABPS) ಮಾರ್ಚ್ 15, 16, 17ರಂದು ಬೆಂಗಳೂರಿನ ಚನ್ನೇನಹಳ್ಳಿಯ ಜನಸೇವಾ ವಿದ್ಯಾ ಕೇಂದ್ರದಲ್ಲಿ ನಡೆಯಲಿದೆ.

ಕರ್ನಾಟಕದಲ್ಲಿ ಈವರೆಗೆ ಆರು ಎಬಿಪಿಎಸ್ ಜರುಗಿದ್ದು, ಈ ಸಭೆ ಏಳನೆಯದ್ದಾಗಿದೆ.

ಆರೆಸ್ಸೆಸ್ ನ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್ ಮತ್ತು ಸರಕಾರ್ಯವಾಹರಾದ ಸುರೇಶ್ (ಭಯ್ಯಾಜೀ) ಜೋಷಿಯವರು ಸಭೆಯ ಕಲಾಪಗಳನ್ನು ನಡೆಸುತ್ತಾರೆ. ಅಧಿವೇಶನದಲ್ಲಿ ಆರೆಸ್ಸೆಸ್ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ 35ಕ್ಕೂ ಹೆಚ್ಚು ಸಂಘಟನೆಗಳ 1,400 ಪ್ರತಿನಿಧಿಗಳು ಭಾಗವಹಿಸುತ್ತಾರೆ. ಆರೆಸ್ಸೆಸ್ ಹಾಗೂ ವಿವಿಧ ಸಂಘಟನೆಗಳ ವಾರ್ಷಿಕ ವರದಿ, ಸಂಘಟನೆಯ ವಿಸ್ತಾರ, ಹೊಸ ಆಯಾಮಗಳು, ಕಾರ್ಯಕ್ರಮಗಳು, ಮುಂಬರುವ ವರ್ಷದ ಯೋಜನೆ ಇತ್ಯಾದಿ ವಿಷಯಗಳು ಈ ಸಭೆಯಲ್ಲಿ ಚರ್ಚೆಯಾಗಲಿವೆ. ಜೊತೆಗೆ ಈ ಸಭೆಯಲ್ಲಿ ರಾಷ್ಟ್ರೀಯ ಮಹತ್ತ್ವವುಳ್ಳ ಕೆಲವು ವಿಷಯಗಳ ಕುರಿತಾಗಿ ನಿರ್ಣಯಗಳನ್ನು ತೆಗೆದುಕೊಳ್ಳಲಾಗುತ್ತದೆ.

ಸಭೆಯಲ್ಲಿ 4 ಪತ್ರಿಕಾಗೋಷ್ಠಿಗಳನ್ನು ಆಯೋಜಿಸಲಾಗಿದೆ. ಅದರ ವಿವರಗಳು ಕೆಳಕಂಡಂತೆ ಇವೆ.

ಸಭೆ ನಡೆಯುವ ಸ್ಥಳಕ್ಕೆ ಪತ್ರಕರ್ತರನ್ನು ಕರೆದುಕೊಂಡು ಹೋಗಲು ಬೆಂಗಳೂರಿನ ಪ್ರೆಸ್ ಕ್ಲಬ್ ನಿಂದ ವಾಹನ ವ್ಯವಸ್ಥೆ ಮಾಡಲಾಗಿದೆ. ಗೋಷ್ಠಿ, ಚಹಾ, ಉಪಹಾರ / ಊಟದ ನಂತರ ಅವರನ್ನು ಪ್ರೆಸ್ ಕ್ಲಬ್ ನ ವರೆಗೆ ವಾಪಸ್ಸು ಕರೆದುಕೊಂಡು ಬರುವ ವ್ಯವಸ್ಥೆಯನ್ನೂ ಮಾಡಲಾಗಿದೆ. ನಿಮ್ಮ ಸುದ್ದಿ ಸಂಸ್ಥೆಯಿಂದ ಪತ್ರಿಕಾಗೋಷ್ಠಿಗೆ ಬರುವ ಪತ್ರಕರ್ತರ ಪಟ್ಟಿಯನ್ನು ನಮ್ಮೊಂದಿಗೆ ಇಮೈಲ್ ಮೂಲಕ (praveen.patavardhan@gmail.com, samvadk@gmail.com) ಅಥವಾ ಫೋನ್ ಮೂಲಕ (98453 42972, 97312 64009) ತಿಳಿಸಬೇಕೆಂದು ಕೇಳಿಕೊಳ್ಳುತ್ತೇವೆ. ಪತ್ರಿಕಾಗೋಷ್ಠಿಗೆ ಬರುವ ಪತ್ರಕರ್ತರೊಂದಿಗೆ ವಾಹನ ವ್ಯವಸ್ಥೆಯಲ್ಲಿರುವ ನಮ್ಮ ಕಾರ್ಯಕರ್ತರ ವಿವರಗಳನ್ನು ಹಂಚಿಕೊಳ್ಳಲಾಗುವುದು.

ಎಬಿಪಿಎಸ್ ನಡೆಯುವ ಸ್ಥಳ:
ಜನಸೇವಾ ವಿದ್ಯಾ ಕೇಂದ್ರ, ಚೆನ್ನೇನಹಳ್ಳಿ, ಮಾಗಡಿ ಮುಖ್ಯ ರಸ್ತೆ, ಬೆಂಗಳೂರು -562 130

https://g.co/kgs/2gvYtG

ದಿನಾಂಕ ಜನಸೇವಾ ವಿದ್ಯಾ ಕೇಂದ್ರದಲ್ಲಿ
ಪತ್ರಿಕಾ ಗೋಷ್ಠಿಯ ಸಮಯ
ಪ್ರೆಸ್ ಕ್ಲಬ್ ನಿಂದ ವಾಹನ ಹೊರಡುವ ಸಮಯ
13 ಮಾರ್ಚ್, ಶುಕ್ರವಾರ ಬೆಳಿಗ್ಗೆ 11.00 ಗಂಟೆ
ಪತ್ರಿಕಾಗೋಷ್ಠಿಯ ನಂತರ ಉಪಹಾರದ ವ್ಯವಸ್ಥೆ ಇದೆ
ಬೆಳಿಗ್ಗೆ 9.00 ಗಂಟೆ
15 ಮಾರ್ಚ್, ಭಾನುವಾರ ಬೆಳಿಗ್ಗೆ 8.30 ಗಂಟೆ
ಪತ್ರಿಕಾಗೋಷ್ಠಿಯ ನಂತರ ಉಪಹಾರದ ವ್ಯವಸ್ಥೆ ಇದೆ
ಬೆಳಿಗ್ಗೆ 6.45 ಗಂಟೆ
16 ಮಾರ್ಚ್, ಸೋಮವಾರ ಮಧ್ಯಾಹ್ನ 12.00 ಗಂಟೆ
ಪತ್ರಿಕಾಗೋಷ್ಠಿಯ ನಂತರ ಊಟದ ವ್ಯವಸ್ಥೆ ಇದೆ
ಬೆಳಿಗ್ಗೆ 10.00 ಗಂಟೆ
17 ಮಾರ್ಚ್, ಮಂಗಳವಾರ ಮಧ್ಯಾಹ್ನ 12.00 ಗಂಟೆ
ಪತ್ರಿಕಾಗೋಷ್ಠಿಯ ನಂತರ ಊಟದ ವ್ಯವಸ್ಥೆ ಇದೆ
ಬೆಳಿಗ್ಗೆ 10.00 ಗಂಟೆ

ಪ್ರವೀಣ್ ಪಟವರ್ಧನ್
ಸಂಯೋಜಕ, ವಿಶ್ವ ಸಂವಾದ ಕೇಂದ್ರ, ಬೆಂಗಳೂರು
ಮೊಬೈಲ್: +91 98453 42972
ಇಮೈಲ್: praveen.patavardhan@gmail.com, samvadk@gmail.com

Leave a Reply

Your email address will not be published.

Dhyeya

Contact Us

Dhyeya Media Pvt. Ltd.
#50, 1st Floor, Acharya Arcade, 4th Cross,
1st Block, 3rd Phase, Banashankari 3rd Stage,
Bengaluru – 560 085