ಬೆಂಗಳೂರು : ಪ್ರಧಾನಿ ಮೋದಿಯವರ ಮಹತ್ತ್ವದ ಯೋಜನೆಯಾದ ದೇಶದ 109 ಸಿಟಿಗಳನ್ನು ಸ್ಮಾರ್ಟ್ ಸಿಟಿಯಾಗಿ ರೂಪಿಸುವ ಯೋಜನೆಯಲ್ಲಿ ಇದೀಗ ಬೆಂಗಳೂರು ಸೇರಿಕೊಂಡಿದೆ.
ಸ್ಮಾರ್ಟ್ ಸಿಟಿಯಾಗುವ 109ಸಿಟಿಗಳ ಪೈಕಿ ಬೆಂಗಳೂರು ಮೂವತ್ತು ಹೆಸರುಗಳಿರುವ ಮೂರನೇ ಪಟ್ಟಿಯಲ್ಲಿ 14 ನೇ ಸ್ಥಾನ ಪಡೆದುಕೊಂಡಿದೆ. ಕೇಂದ್ರದ 1700 ಕೋಟಿ ಅನುದಾನದಲ್ಲಿ ಬೆಂಗಳೂರು ಸ್ಮಾರ್ಟ್ ಸಿಟಿಯಾಗಿ ಅಭಿವೃದ್ಧಿ ಹೊಂದಲಿದೆ.
ಸದ್ಯ 500 ಕೋಟಿ ಬರಲಿದ್ದು ರಾಜ್ಯ ಸರ್ಕಾರ ಕೂಡಾ ಹಣ ವೆಚ್ಚ ಮಾಡಲಿದೆ. ರಸೆಲ್ ಮಾರುಕಟ್ಟೆ, ಕೆ ಆರ್ ಮಾರುಕಟ್ಟೆ, ಟೆಂಡರ್ ಶೂರ್ ರೋಡ್ಸ್, ಹಲಸೂರು ಕೆರೆ ಅಭಿವೃದ್ಧಿ ಯೋಜನೆಗಳನ್ನು ಸ್ಮಾರ್ಟ್ ಸಿಟಿ ಹೊಂದಿದೆ ಎಂದು ಬೆಂಗಳೂರಿನ ಮೇಯರ್ ಪದ್ಮಾವತಿ ಹೇಳಿದ್ದಾರೆ.
ಈಗ ಪ್ರಕಟಿಸಿರುವ ಪಟ್ಟಿಯಲ್ಲಿ ತಿರುವನಂತಪುರ ಮೊದಲ ಸ್ಥಾನದಲ್ಲಿದ್ದು, ಇದುವರೆಗೆ 90 ನಗರಗಳನ್ನು ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಗುರುತಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ವೆಂಕಯ್ಯನಾಯ್ಡು ಪ್ರಕಟಿಸಿದ್ದಾರೆ.