ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿಯ ಕಚೇರಿಯಿಂದ ಬಂದಿರುವ ಭಾರೀ ಖರ್ಚಿನ ಬಾಬತ್ತಿನ ಕುರಿತು ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಚಾರ್ಟರ್ಡ್ ಅಕೌಂಟೆಂಟ್‌ಗಳನ್ನು ಒಳಗೊಂಡ ಆಡಿಟಿಂಗ್ ತಂಡವನ್ನು ರಚಿಸಲು ಪರ್ರಿಕ್ಕರ್ ಆಗ್ರಹಿಸಿದ್ದಾರೆ. ‘‘ವಿಧಾನ ಸಭಾ ಚುನಾವಣೆ ಸಂದರ್ಭ 15 ದಿನಗಳ ಮಟ್ಟಿಗೆ ಅಧಿಕೃತ ಕೆಲಸಗಳಿಗೆಂದು ವಾಹನಗಳನ್ನು ಬಾಡಿಗೆಗೆ ತೆಗೆದುಕೊಂಡಿದ್ದಕ್ಕೆಂದು 16.86 ಕೋಟಿ ರು.ಗಳ ಬಿಲ್ ಸಲ್ಲಿಸಲಾಗಿದೆ. ಸಂಬಂಧಿತ ಕಡತಗಳ ಕುರಿತು ಪರಿಶೀಲನೆ ನಡೆಸಲು ಚಾರ್ಟ್‌ರ್ಡ್ ಅಕೌಂಟೆಂಟ್‌ಗಳಿಗೆ ಆಡಿಟ್ ವರದಿ ಸಲ್ಲಿಸಲು ಸೂಚಿಸಿದ್ದೇನೆ’’ ಎಂದು ಹೇಳಿದ್ದಾರೆ.