ಜೂ.19 : ಬಹುನಿರೀಕ್ಷಿತ ಭಾರತ ಪಾಕಿಸ್ತಾನ ಪಂದ್ಯ ಭಾರತದ ಪಾಲಿಗೆ ನಿರಾಶಾದಾಯಕವಾಗಿ ಹೊರಹೊಮ್ಮುತ್ತಿದ್ದಂತೆಯೇ ಭಾರತದ ಸೋಲಿನ ಕಾರಣ ದೇಶದಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.
ಅಸಾಮಾನ್ಯ ಆಟಗಾರರೆಂದೇ ಬಿಂಬಿತರಾಗಿದ್ದ ಭಾರತೀಯ ಕ್ರಿಕೇಟಿಗರು ಮಹತ್ತ್ವದ ಫೈನಲ್ ಪಂದ್ಯದಲ್ಲಿ ಬದ್ಧ ಎದುರಾಳಿ ಪಾಕಿಸ್ತಾನದ ಎದುರು ಮುಗ್ಗರಿಸಿದ್ದು ಭಾರತ ತಂಡದ ಅಭಿಮಾನಿಗಳಿಗೆ ತೀವ್ರ ಬೇಸರ ತಂದಿದೆ. ಹೀಗೆ ಹೀನಾಮಾನವಾಗಿ ಭಾರತ ಸೋಲಲು ಕಾರಣವಾದ ಕೆಲವು ಅಂಶಗಳು ಇಲ್ಲಿವೆ ನೋಡಿ.
ಕಳಪೆ ನಿರ್ಣಯಗಳು
ಟಾಸ್ ಗೆದ್ದು ಬೌಲಿಂಗ್ ಆರಿಸಿಕೊಂಡ ಟೀಮ್ ಇಂಡಿಯಾ ಫಾಸ್ಟ್ ಬೌಲರ್ ಗಳಿಗೆ ಸಹಾಯ ಒದಗಿಸುವ ಪಿಚ್ ನಲ್ಲಿ ಸ್ಪಿನ್ನರ್ಸ್ ಗಳಿಗೆ ಹೆಚ್ಚು ಆದ್ಯತೆ ನೀಡಿದ್ದಲ್ಲದೇ, ಕಳೆದ ಪಂದ್ಯದ ಹೀರೋ ಕೇದಾರ್ ಜಾಧವ್ ಅವರನ್ನು ಬೌಲಿಂಗ್ ದಾಳಿಗೆ ಇಳಿಸುವಲ್ಲಿ ಪರಿಸ್ಥಿತಿ ನಿಭಾಯಿಸಲು ಯಾವುದೇ ಪಾರ್ಟ್ ಟೈಮ್ ಬೌಲರ್ ಗೆ ಕಷ್ಟವಾಗುವ ಸಮಯ ಬಂದಿತ್ತು ಎನ್ನುವುದು ಕ್ರಿಕೇಟ್ ಧುರೀಣರ ಅಭಿಪ್ರಾಯವಾಗಿದೆ.
ಕೈ ಚೆಲ್ಲಿದ ಅವಕಾಶಗಳು
ಫಕಾರ್ ರವರ ರನೌಟ್ ಹಾಗೂ ಕ್ಯಾಚ್ ಗಳನ್ನು ಪ್ರಾರಂಭದ ಹಂತದಲ್ಲಿಯೇ ಕೈಚೆಲ್ಲಿದ್ದಲ್ಲದೇ, ಕೊಹ್ಲಿ ಬ್ಯಾಟಿಂಗ್ ಮಾಡುವಾಗ ಪಾಕಿಸ್ತಾನದ ಫೀಲ್ಡರ್ ಕೈಚೆಲ್ಲಿದ ಕ್ಯಾಚ್ ನ ಸದುಪಯೋಗ ಪಡೆಸಿಕೊಳ್ಳದೇ ಮುಂದಿನ ಎಸೆತದಲ್ಲಿಯೇ ಔಟಾದದ್ದು ಅಭಿಮಾನಿಗಳಲ್ಲಿ ನಿರಾಶೆ ಮೂಡಿಸಿದೆ.
ಬೇಜವಾಬ್ದಾರಿ ಬ್ಯಾಟಿಂಗ್
ಬೃಹತ್ ಮೊತ್ತವನ್ನು ಬೆನ್ನತ್ತಿದ್ದ ಭಾರತಕ್ಕೆ ಹಾರ್ದಿಕ್ ಪಾಂಡ್ಯಾ ಹೊರತುಪಡಿಸಿ ಮತ್ಯಾವ ಸ್ಟಾರ್ ಬ್ಯಾಟ್ಸ್‌ಮನ್ ಗಳೂ ಅಸರೆಯಾಗದಿದ್ದುದು ಭಾರತಕ್ಕೆ ಭಾರೀ ಹಿನ್ನಡೆಯ ಸೋಲನ್ನು ತಂದಿತ್ತಿತು ಎಂದು ಹಲವು ಕ್ರಿಕೆಟ್ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ.
ಒಟ್ಟಿನಲ್ಲಿ ತಮ್ಮ ತಪ್ಪಿನಿಂದ ಪಾಠ ಕಲಿಯುವ ಟೀಂ ಇಂಡಿಯಾದ ಆಟಗಾರರು ತಮ್ಮ ‘ಓವರ್ ಕಾನ್ಫಿಡೆನ್ಸ್’ನಿಂದ ಇಂದು ‘ಸೆಲ್ಫ್ ಡಿಫೆನ್ಸ್’ ನ್ನೂ ಮಾಡಿಕೊಳ್ಳಲಾಗದ ಸ್ಥಿತಿ ಬಂದಿರುವುದು ಭಾರತೀಯ ಅಭಿಮಾನಿಗಳಿಗೆ ಅತ್ಯಂತ ಬೇಸರ ತಂದಿದೆ. ಇನ್ನಾದರೂ ತಮ್ಮ ತಪ್ಪನ್ನು ತಿದ್ದಿಕೊಂಡು ಭಾರತ ತಂಡ ಯಶಸ್ಸಿನ ಹಾದಿಗೆ ಮರಳಲಿ ಎನ್ನುವುದು ಶತಕೋಟಿ ಭಾರತೀಯರ ಆಸೆಯಾಗಿದೆ.