ಬೆಂಗಳೂರು, ಆಗಸ್ಟ್ 22 ( ಕರ್ನಾಟಕ ವಾರ್ತೆ):
ತ್ರಿವಳಿ ತಲಾಖ್ ಕುರಿತಂತೆ ಭಾರತ ಸರ್ವೊಚ್ಛ ನ್ಯಾಯಾಲಯವು ನೀಡಿದ ತೀರ್ಪನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವಾಗತಿಸಿದ್ದಾರೆ.
ತ್ರಿವಳಿ ತಲಾಖ್‍ನ ಸಾಂವಿಧಾನಿಕ ಸಿಂಧುತ್ವ ರದ್ದುಗೊಳಿಸಿ ಸರ್ವೋಚ್ಛ ನ್ಯಾಯಾಲಯವು ಈ ದಿನ ನೀಡಿರುವ ತೀರ್ಪು ಸ್ವಾಗತಾರ್ಹ. ಮುಸಲ್ಮಾನ ಸಮುದಾಯವು, ಅದರಲ್ಲೂ ಆ ಸಮುದಾಯದ ಮಹಿಳೆಯರನ್ನು, ವಿಶ್ವಾಸಕ್ಕೆ ತೆಗೆದುಕೊಂಡು ಈ ತೀರ್ಪನ್ನು ಜಾರಿಗೆ ತರಲು ಮುಂದಾಗಬೇಕು ಎಂದು ಸಿದ್ದರಾಮಯ್ಯ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.