ನವದೆಹಲಿ, ಜೂನ್ 22 : ಟೀಂ ಇಂಡಿಯಾದ ಕೋಚ್ ಇನ್ನು ಮುಂದೆ ಯಾರಾದರೂ ಕೂಡಾ ಕುಂಬ್ಳೆ ಸ್ಥಾನವನ್ನು ತುಂಬಲು ಸಾಧ್ಯವಿಲ್ಲ ಎಂದು ಭಾರತದ ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ಅವರು ಅಭಿಪ್ರಾಯಪಟ್ಟಿದ್ದಾರೆ.
ನಾನು ಕುಂಬ್ಳೆಯವರ ಕೋಚಿಂಗ್ ಅವಧಿಯಲ್ಲಿ ಆಡದಿದ್ದರೂ, ಅವರ ನಾಯಕತ್ವದಲ್ಲಿ ಆಡುತ್ತಿದ್ದ ವೇಳೆ ಕುಂಬ್ಳೆಯವರಿಂದ ಸಾಕಷ್ಟು ಅನುಭವಗಳನ್ನು ಪಡೆದುಕೊಂಡಿದ್ದೇನೆ. ಕುಂಬ್ಳೆಯವರ ಅಪಾರ ಅನುಭವ ಹಾಗೂ ಹಿರಿಯ ಆಟಗಾರರಾಗಿ ಅವರ ಮಾರ್ಗದರ್ಶನ ತಂಡಕ್ಕೆ ಅಪಾರ ಪ್ರಮಾಣದ ಲಾಭವನ್ನೊದಗಿಸುತ್ತದೆ. ಇನ್ಯಾವ ಆಟಗಾರರು ಈ ಕೋಚ್ ಹುದ್ದೆಗೆ ಬಂದರೂ ಕುಂಬ್ಳೆ ಸ್ಥಾನವನ್ನು ತುಂಬುವುದು ಕಷ್ಟಸಾಧ್ಯ ಎಂದು ಸೇಹ್ವಾಗ್ ಹೇಳಿದ್ದಾರೆ.
ಕುಂಬ್ಳೆ ತಮ್ಮ ಕೋಚಿಂಗ್ ಅವಧಿಯಲ್ಲಿ 17 ಟೆಸ್ಟ್ ಪಂದ್ಯಗಳಲ್ಲಿ 12ರಲ್ಲಿ ಗೆಲುವು, 13 ಏಕದಿನ ಪಂದ್ಯಗಳಲ್ಲಿ 8 ರಲ್ಲಿ ಗೆಲುವು ದಾಖಲಿಸಿದ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಿದ್ದು ಸೆಹ್ವಾಗ್ ರ ಈ ಮಾತಿಗೆ ಪುಷ್ಟಿ ನೀಡುವುದನ್ನು ಗಮನಿಸಬಹುದಾಗಿದೆ.