ಬರ್ಮಿಂಗ್ ಹ್ಯಾಂ : ಭಾರತ ಕಂಡ ಯಶಸ್ವೀ ನಾಯಕ ಮಹೇಂದ್ರಸಿಂಗ್ ಧೋನಿ ಯಾರನ್ನೂ ಹೀರೋಗಳನ್ನಾಗಿ ಮಾಡಬಲ್ಲರು ಎನ್ನುವುದಕ್ಕೆ ಇದೀಗ ಮತ್ತೊಂದು ನಿದರ್ಶನ ದೊರೆತಿದೆ.
ಮೊನ್ನೆ ಭಾರತ ಹಾಗೂ ಬಾಂಗ್ಲಾದೇಶ ನಡುವೆ ನೆಡೆದ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ನಲ್ಲಿ ತಮೀಮ್ ಹಾಗೂ ರಹೀಂ ಅವರ ವಿಕೇಟ್ ಕಬಳಿಸಿ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದ ಪಾರ್ಟ್ ಟೈಮ್ ಬೌಲರ್ ಕೇದಾರ್ ಜಾಧವ್ ಈ ಯಶಸ್ಸಿನ ಹಿಂದಿನ ರಹಸ್ಯ ಬಿಚ್ಚಿಟ್ಟಿದ್ದಾರೆ.
ಈ ಬಗ್ಗೆ ಸ್ವತಃ ಕೇದಾರ್ ಜಾಧವ್ ಮಾತನಾಡಿದ್ದು ತಮ್ಮ ಬೌಲಿಂಗ್ ಚಾಕಚಕ್ಯತೆಯನ್ನು ಗುರುತಿಸಿದ್ದು ಧೋನಿ ಎಂದು ಹೇಳಿದ್ದಾರೆ.
ಪಂದ್ಯದಲ್ಲಿ ಬ್ಯಾಟ್ಸಮನ್ಗಳು ತಮ್ಮ ಮೇಲುಗೈ ಸಾಧಿಸುತ್ತಿದ್ದಾಗ ಕೊಹ್ಲಿ ಚಿಂತೆಗೀಡಾಗಿದ್ದರು. ಆಗ ಧೋನಿ ನನಗೆ ಬೌಲಿಂಗ್ ನೀಡುವಂತೆ ಹೇಳಿ ನನ್ನ ಹೊಸ ಮುಖವನ್ನೂ ಹಾಗೂ ತಂಡಕ್ಕೆ ಗೆಲುವನ್ನೂ ಸುಲಭಸಾಧ್ಯವಾಗಿಸಿದರು ಎಂದು ಕೇದಾರ್ ಜಾಧವ್ ಹೇಳಿದರು.
ಜಾಧವ್ ಅವರನ್ನು ಬೌಲಿಂಗ್ ದಾಳಿಗಿಳಿಸಲು ಧೋನಿ ಸಲಹೆಯೇ ಕಾರಣ. ತಂಡದಲ್ಲಿ ಮಹತ್ತ್ವದ ನಿರ್ಧಾರ ತೆಗೆದುಕೊಳ್ಳುವಲ್ಲಿ ನಾನು ಧೋನಿಯವರ ಸಲಹೆ ಪಡೆಯುತ್ತೇನೆ. ಈ ಗೆಲುವಿನ ಶ್ರೇಯ ಧೋನಿಗೇ ಸಲ್ಲಬೇಕು ಎಂದು ಕೊಹ್ಲಿ ಹೇಳಿದರು.
ಈ ಮೂಲಕ ರೈಸಿಂಗ್ ಪುಣೆಯನ್ನು ಸ್ಮಿತ್ ನೆಡೆಸುತ್ತಿದ್ದರೂ ಧೋನಿ ಸಲಹೆ ಪಡೆಯುತ್ತಿದ್ದ ಕ್ಯಾಪ್ಟನ್ ಹಾಗೂ ಭಾರತ ತಂಡವನ್ನು ಕೊಹ್ಲಿ ನೆಡೆಸುತ್ತಿದ್ದರೂ ಧೋನಿಯವರ ಸಲಹೆಯ ಪ್ರಾಮುಖ್ಯತೆಯನ್ನು ಗಮನಿಸುವುದಾದರೆ, ಧೋನಿಯಿರುವ ತಂಡಕ್ಕೆ ಧೋನಿಯೇ ಯಶಸ್ಸಿನ ಗುಟ್ಟು ಎನ್ನುವುದು ಜಗಜ್ಜಾಹೀರಾದಂತಾಗಿದೆ.