7 years ago
ಸುತ್ತಲೂ ನೀರು ತುಂಬಿದ ಕೆರೆ. ದೂರದಿಂದ ನೋಡುವಾಗ ಅದೊಂದು ಸುಂದರ ಕೃತಕ ದ್ವೀಪವೆಂಬ ಭಾವನೆ ಮೂಡುತ್ತದೆ. ಆದರೆ ಅದು ಅನಂತಪುರದ ಅನಂತಪದ್ಮನಾಭ ದೇವಸ್ಥಾನವೆಂದು ತಿಳಿದದ್ದು ಅಲ್ಲಿಗೆ ಭೇಟಿಯಿತ್ತಾಗಲೇ..! ಮಂಗಳೂರಿನಿಂದ ಸುಮಾರು 39 ಕಿ.ಮೀ ದೂರವಿರುವ ಕುಂಬ್ಳೆಯಿಂದ ಬದಿಯಡ್ಕ ಮಾರ್ಗವಾಗಿ ಸುಮಾರು ನಾಲ್ಕು ಕಿಲೋಮೀಟರ್ ಸಾಗಿದಾಗ ಅನಂತಪುರ ದೇವಸ್ಥಾನವು ನಮ್ಮನ್ನು ಕೈಬೀಸಿ ಕರೆಯುತ್ತದೆ!. ಬೇಡಿದ ವರವನ್ನು ಕರುಣಿಸುವ, ನಮ್ಮ ಇಷ್ಟಾರ್ಥಗಳನ್ನು ಈಡೇರಿಸುವ ಶ್ರೀ ಅನಂತಪದ್ಮನಾಭ ದೇವರು ಇಲ್ಲಿ ನೆಲೆಸಿದ್ದಾನೆ. ತಿರುವಂತಪುರದ ಅನಂತಪದ್ಮನಾಭ ದೇವಳಕ್ಕೆ ಇದು ಮೂಲ ಸ್ಥಾನವೆಂಬುದು ಪುರಾಣ […]