ಮಂಗಳೂರು, 17 ಫೆಬ್ರವರಿ 2020
ಶ್ರೀ ರಾಮಚಂದ್ರಾಪುರ ಮಠದ ಮಠಾಧೀಶರಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿಗಳನ್ನು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಶ್ರೀ ಬಿ.ಎಲ್. ಸಂತೋಷ್ ಅವರು ಇಂದು ಮಂಗಳೂರಿನ ನಂತೂರಿನಲ್ಲಿರುವ ಶ್ರೀ ಭಾರತಿ ಕಾಲೇಜಿನ ಆವರಣದಲ್ಲಿ ಭೇಟಿಯಾಗಿ ಆಶೀರ್ವಾದ ಪಡೆದರು.
ಮಾತುಕತೆಯ ಸಂದರ್ಭದಲ್ಲಿ ಮಠದ ಬಹುನಿರೀಕ್ಷೆಯ ಯೋಜನೆಯಾದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ವಿವರಗಳನ್ನು ತಿಳಿದುಕೊಂಡ ಸಂತೋಷ್ ಅವರು “ಈ ಮಹತ್ಕಾರ್ಯದ ಜೊತೆ ತಾನಿದ್ದೇನೆ” ಎಂದು ವಚನವಿತ್ತರು.
ಬಹು ಫಲಪ್ರದ ಭೇಟಿಯ ಕುರಿತ ಮಾಹಿತಿಯನ್ನು ಸ್ವಾಮೀಜಿಯವರು ಟ್ವೀಟ್ ಮೂಲಕ ಹಂಚಿಕೊಂಡರು.
@BJP4India ದ ಸಂಘಟನೆಯ ಹೊಣೆಗಾರಿಕೆಯನ್ನು ರಾಷ್ಟ್ರೀಯ ಸ್ತರದಲ್ಲಿ ಹೊತ್ತಿರುವ @blsanthosh ಜೊತೆಯಲ್ಲಿ @VVV_University ಯ ಕುರಿತಾಗಿ ಇಂದು ಮಂಗಳೂರಿನ ನಮ್ಮ @ShreeCollege ನ ಆವರಣದಲ್ಲಿ ಆತ್ಮೀಯ ಸಂವಾದವು ಏರ್ಪಟ್ಟಿತು; "ಈ ಮಹತ್ಕಾರ್ಯದ ಜೊತೆ ತಾನಿದ್ದೇನೆ" ಎಂಬ ಅವರ ವಾಣಿಯು ವಿವಿವಿ ತಂಡದ ಕಾರ್ಯೋತ್ಸಾಹವನ್ನು ಇಮ್ಮಡಿಗೊಳಿಸಿತು! https://t.co/2IxHRdCAn3
— RaghaveshwaraBharati (@SriSamsthana) February 17, 2020