ಜೂ.15, ಕೊತ್ತನಹಳ್ಳಿ : ಬಿ.ಜೆ.ಪಿ ಜನಸಂಪರ್ಕ ಕಾರ್ಯಕ್ರಮದ ಅಂಗವಾಗಿ ರಾಜ್ಯದ ವಿವಿಧೆಡೆ ನೆಡೆಯುತ್ತಿರುವ ‘ಬಿ.ಜೆ.ಪಿ ನಡಿಗೆ ದಲಿತರ ಮನೆಗೆ’ ಅಂಗವಾಗಿ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೊತ್ತನಹಳ್ಳಿ ಗ್ರಾಮದ ರೈತ ಬಾಂಧವರ ಮನೆಗೆ ಮಾಜಿ ಮುಖ್ಯಮಂತ್ರಿ ಶ್ರೀ ಬಿ.ಎಸ್ ಯಡಿಯೂರಪ್ಪನವರು ಭೇಟಿ ನೀಡಿದರು. ನಂತರ ಗ್ರಾಮದ ಹೊನ್ನಾರುತಿ ಲಕ್ಷ್ಮೀದೇವಿ ದೇವಸ್ಥಾನದಲ್ಲಿ ನೆಡೆದ ಜನಸಂಪರ್ಕ ಸಭೆಯನ್ನುದ್ದೇಶಿಸಿ ಮಾತನಾಡಿದ ಶ್ರೀ ಬಿ.ಎಸ್ ಯಡಿಯೂರಪ್ಪನವರು, ಕರ್ನಾಟಕ ರಾಜ್ಯದ ಎಲ್ಲರ ಏಳ್ಗೆಗಾಗಿ ಪ್ರಾಮಾಣಿಕ ಪ್ರಯತ್ನದ ಭಾಗವಾಗಿ ಇಂದು ಆರ್ತರ, ದೀನದಲಿತರ ಮೊಹಲ್ಲಾಗಳಿಗೆ ಭೇಟಿ ನೀಡುವ, ಹಾಗೆಯೇ ಸಾರ್ವಜನಿಕ ಸಭೆಯಲ್ಲಿ ಪಾರದರ್ಶಕವಾಗಿ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಆಲೋಚನೆಗಳನ್ನು ಒಳಗೊಂಡು ‘ಬಿ.ಜೆ.ಪಿ ನಡಿಗೆ ದಲಿತರ ಮನೆಗೆ’ ಎಂಬ ಆಂದೋಲನ ರೂಪದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ನಿಮ್ಮ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸುವುದಕ್ಕಾಗಿ ಪ್ರಸ್ತುತ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸುತ್ತೇವೆ ಹಾಗೂ ಮುಂದಿನ ದಿನಗಳಲ್ಲಿ ಅಧಿಕಾರಕ್ಕೆ ಬಂದಲ್ಲಿ ರಾಜ್ಯದ ಜ್ವಲಂತ ಸಮಸ್ಯೆಗಳತ್ತ ಗಮನ ಹರಿಸುತ್ತೇವೆ ಎಂದರು.
ಕಾರ್ಯಕ್ರಮದ ನಂತರ ಬರಗಾಲದಿಂದ ಬತ್ತಿಹೋಗಿರುವ ಗ್ರಾಮದ ಜೆ ಎಸ್ ಹಳ್ಳಿಕೆರೆ ವೀಕ್ಷಿಸಿ ಅಲ್ಲಿನ ಸ್ಥಳೀಯರ ಸಮಸ್ಯೆಗಳನ್ನು ಆಲಿಸಿದರು.