Saturday, 27th April 2024
 
Advertise With Us | Contact Us

ಆಸ್ಟ್ರೇಲಿಯಾ ಓಪನ್ : ನಾಲ್ವರು ಭಾರತೀಯರು ಕ್ವಾರ್ಟರ್ ಫೈನಲ್ಸ್ ಗೆ,

ಸಿಡ್ನಿ, ಜೂನ್ 22 : ಅಸ್ಟ್ರೇಲಿಯಾ ಓಪನ್ ಸೂಪರ್ ಸಿರೀಸ್ ನಲ್ಲಿ ನಾಲ್ವರು ಭಾರತೀಯರು ಕ್ವಾರ್ಟರ್ ಫೈನಲ್ಸ್ ಗೆ ಲಗ್ಗೆ ಇಟ್ಟಿದ್ದಾರೆ.

ಭಾರತದ ಸ್ಟಾರ್ ಶಟ್ಲರ್ ಗಳಾದ ಕಿಡಂಬಿ ಶ್ರೀಕಾಂತ್, ಪಿವಿ ಸಿಂಧು, ಸೈನಾ ನೆಹ್ವಾಲ್ ಹಾಗೂ ಬಿ. ಸಾಯಿ ಪ್ರಣೀತ್ ಆಸ್ಟ್ರೇಲಿಯಾ ಓಪನ್ ಸಿರೀಸ್ ನಲ್ಲಿ ಕ್ವಾರ್ಟರ್ ಫೈನಲ್ಸ್ ಗೆ ಲಗ್ಗೆ ಇಟ್ಟಿದ್ದಾರೆ.

ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಬಿ ಸಾಯಿ ಪ್ರಣೀತ್ ಅವರು ಚೀನಾದ ಯುಕ್ಸಿಯಂಗ್ ವಿರುದ್ಧ ಜಯಸಾಧಿಸಿದರೆ, ಇಂಡೋನೇಷ್ಯಾ ಓಪನ್ ಪ್ರಶಸ್ತಿ ವಿಜೇತ ಶ್ರೀಕಾಂತ್ ವಿಶ್ವ ಅಗ್ರ ಶ್ರೇಯಾಂಕಿತ ಮಲೇಷ್ಯಾದ ಸಾನ್ ವಾನ್ ವೊ ಅವರನ್ನು ಮಣಿಸಿ ಕ್ವಾರ್ಟರ್ ಫೈನಲ್ ಗೇರಿದ್ದಾರೆ.

ಇನ್ನು ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಬೆಳ್ಳಿತಾರೆ ಪಿ ವಿ ಸಿಂಧು ಅವರು ಚೆನ್ ಅವರನ್ನು ಸೋಲಸಿದರೆ, ಸೈನಾ ನೆಹ್ವಾಲ್ ಅವರು ಕೂಡಾ ಕ್ವಾರ್ಟರ್ ಫೈನಲ್ಸ್ ತಲುಪಿರುವುದು ಭಾರತೀಯರ ಶುಭಾರಂಭವಾದಂತಾಗಿದೆ.

Leave a Reply

Your email address will not be published.

Dhyeya

Contact Us

Dhyeya Media Pvt. Ltd.
#50, 1st Floor, Acharya Arcade, 4th Cross,
1st Block, 3rd Phase, Banashankari 3rd Stage,
Bengaluru – 560 085