7 years ago
ರಾಮಾಯಣವೆಂಬ ಮಹಾಕಾವ್ಯ ಸಮುದ್ರದಲ್ಲಿ ಲಕ್ಷೋಪಲಕ್ಷ ಪಾತ್ರಗಳವೆ. ನಮ್ಮಲ್ಲಿ ರಾಮಾಯಣಗಳ ಸಂಖ್ಯೆಗೂ ಮಿತಿಯಿಲ್ಲ. ‘ತಿಣುಕಿದನು ಫಣಿರಾಯ ರಾಮಾಯಣದ ಕವಿಗಳ ಭಾರದಲಿ; ತಿಂಥಿಣಿಯ ರಘುವರ ಚರಿತೆಯಲಿ ಕಾಲಿಡಲು ತೆರಪಿಲ್ಲ’ ಎಂದು ಕುಮಾರವ್ಯಾಸ ಒಂದೆಡೆ ಹೇಳುತ್ತಾನೆ. ಇಲ್ಲಿ ಕೆಲವು ಹೆಬ್ಬಂಡೆಗಳಂಥಹ ಪಾತ್ರಗಳಿದ್ದರೆ, ಇನ್ನು ಕೆಲವು ಮಧ್ಯಮ, ಸೂಕ್ಷ್ಮಗಾತ್ರದವು. ಹೀಗಿದ್ದರೂ ಇವುಗಳಲ್ಲಿ ಯಾವೊಂದೂ ಪ್ರಧಾನವಲ್ಲ, ಯಾವುದೂ ನಗಣ್ಯವಲ್ಲವೆನಿಸುತ್ತದೆ. ವಾಲ್ಮೀಕಿಯ ಶ್ರೀರಾಮಾಯಣವೆಂಬ ಕಾವ್ಯವನ್ನೇ ಅವಲೋಕಿಸುವುದಾದರೆ, ಅದರಲ್ಲಿ ಕಥಾನಾಯಕನಾದ ರಾಮನೇ ಕೇಂದ್ರವ್ಯಕ್ತಿ. ರಾಮನ ಕಥೆಯೇ ರಾಮಾಯಣವೆಂಬಷ್ಟು ಜನಪ್ರಿಯವಾಗಿಬಿಟ್ಟಿದೆ. ಇತ್ತೀಚೆಗಿನ ಬೆಳವಣಿಗೆಯಲ್ಲಿ ಸೀತೆಯೇ ಪ್ರಧಾನಳಾಗಿ ಸೀತಾಯಣವೆಂದೂ ಕರೆಸಿಕೊಳ್ಳುತ್ತಿರುವುದನ್ನು […]
7 years ago
ಭಾರತ, ರಾಮಾಯಣಗಳು ಕೇವಲ ಕೆಲವೇ ಮುಖ್ಯಭೂಮಿಕೆಗಳ ರಂಜನೆಗೆ ವೇದಿಕೆಯೋಪಾದಿಯಲ್ಲಿ ಕಾಣಿಸಿಕೊಂಡರೂ, ಅಲ್ಲಿನ ಗೌಣಪಾತ್ರಗಳ ಮನೋವಿಶ್ಲೇಷಣೆಗೆ ಹೃದಯರಂಗಸ್ಥಳವನ್ನು ತೆರವುಗೊಳಿಸಿ ಮೆರೆಸುವ ಹಂಬಲ ನನ್ನಲ್ಲುಂಟಾಗಿದೆ. ರಾಮಕೇಂದ್ರಿತವಾದ ವಾಲ್ಮೀಕಿ ರಾಮಾಯಣದಲ್ಲಿ ಮಂಥರೆಯನ್ನು ಕೇವಲ ಒಂದು ಬಗೆಯಲ್ಲಿ ಮಾತ್ರ ಕಾಣಲಾದರೂ, ಅವಳಲ್ಲಿಯೂ ನಿಷ್ಕಪಟ ಮನವಿದೆ ಎಂಬುದನ್ನು ಅರಿಯಬೇಕಾಗಿದೆ.ವಸ್ತುವೊಂದನ್ನು ಒಂದೇ ನೆಲೆಯಿಂದ ನೋಡುವಬದಲು, ಪೂರ್ಣದರ್ಶನದ ಬಳಿಕ ನಿರ್ಣಯ ಕೈಗೊಂಡರೆ ಹೆಚ್ಚು ಪರಿಪೂರ್ಣವೆನಿಸಿಕೊಳ್ಳುತ್ತದೆ.ಅಂಗೈಯಲ್ಲಿ ಆಡುವ...