7 years ago
ಭಾರತ, ರಾಮಾಯಣಗಳು ಕೇವಲ ಕೆಲವೇ ಮುಖ್ಯಭೂಮಿಕೆಗಳ ರಂಜನೆಗೆ ವೇದಿಕೆಯೋಪಾದಿಯಲ್ಲಿ ಕಾಣಿಸಿಕೊಂಡರೂ, ಅಲ್ಲಿನ ಗೌಣಪಾತ್ರಗಳ ಮನೋವಿಶ್ಲೇಷಣೆಗೆ ಹೃದಯರಂಗಸ್ಥಳವನ್ನು ತೆರವುಗೊಳಿಸಿ ಮೆರೆಸುವ ಹಂಬಲ ನನ್ನಲ್ಲುಂಟಾಗಿದೆ. ರಾಮಕೇಂದ್ರಿತವಾದ ವಾಲ್ಮೀಕಿ ರಾಮಾಯಣದಲ್ಲಿ ಮಂಥರೆಯನ್ನು ಕೇವಲ ಒಂದು ಬಗೆಯಲ್ಲಿ ಮಾತ್ರ ಕಾಣಲಾದರೂ, ಅವಳಲ್ಲಿಯೂ ನಿಷ್ಕಪಟ ಮನವಿದೆ ಎಂಬುದನ್ನು ಅರಿಯಬೇಕಾಗಿದೆ.ವಸ್ತುವೊಂದನ್ನು ಒಂದೇ ನೆಲೆಯಿಂದ ನೋಡುವಬದಲು, ಪೂರ್ಣದರ್ಶನದ ಬಳಿಕ ನಿರ್ಣಯ ಕೈಗೊಂಡರೆ ಹೆಚ್ಚು ಪರಿಪೂರ್ಣವೆನಿಸಿಕೊಳ್ಳುತ್ತದೆ.ಅಂಗೈಯಲ್ಲಿ ಆಡುವ ಆಮಲಕವನ್ನು ಕಾಣುವಂತೆ, ಕಜ್ಜಾಯದ ಒಳಗಿನ ಸವಿಯನ್ನು ಅನುಭವಿಸುವಂತೆ ಮಂಥರಾವಲೋಕನ ಮಾಡಲು ಇದೀಗ ಮನಸ್ಸು ತವಕಿಸುತ್ತಿದೆ. ರಾಮಾಯಣದ ಮಂಥರೆಯು ಮಾಡಿದ ಕಾರ್ಯದಲ್ಲಿ […]